Kannada

Department / Kannada

Kannada

Department / Kannada

Department of Kannada

ಸಿ.ಬಿ. ಭಂಡಾರಿ ಜೈನ್ ಕಾಲೇಜಿನ ಕನ್ನಡ ವಿಭಾಗಕ್ಕೆ ಸುದೀರ್ಘವಾದ ಇತಿಹಾಸವಿದೆ. ಕನ್ನಡ ವಿಭಾಗದ ಎಲ್ಲಾ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ಕುವೆಂಪು ಕನ್ನಡ ಸಂಘದ ವತಿಯಿಂದ ಆಯೋಜಿಸಲಾಗತ್ತಿದೆ. ಕನ್ನಡ ಸಂಘವು ಇಂದಿನ ಆಧುನಿಕ ಸಂದರ್ಭದಲ್ಲಿ ಯಾಂತ್ರಿಕವಾಗುತ್ತಿರುವ ವಿದ್ಯಾರ್ಥಿಗಳ ಮನಸ್ಥಿತಿಗೆ ತಲುಪುವ ರೀತಿಯಲ್ಲಿ ಕನ್ನಡ ಸಾಹಿತ್ಯದ ಎಲ್ಲಾ ಆಯಾಮಗಳಲ್ಲಿ ಪ್ರಯತ್ನಿಸುತ್ತಿದೆ. ಸಂಘವು ಈ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ರೂಢಿಸಿರುವ ಸಾಹಿತ್ಯದ ಸ್ಪರ್ಧೆಗಳಾದ ಪ್ರಬಂಧ ಮಂಡನೆ, ಆಶುಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಒಗಟು ಬಿಡಿಸುವಸ್ಪರ್ಧೆ, ಪದಬಂಧ, ಜಾನಪದ ಹಾಡು ಮತ್ತು ಕವನ ವಾಚನ ಸ್ಪರ್ಧೆ ಇತ್ಯಾದಿ ಹಲವು ಬಗೆಯತರಗತಿಯ ಚಟುವಟಿಕೆಗಳ ಜೊತೆಗೆ ಉಪನ್ಯಾಸಗಳು, ರಾಜ್ಯೋತ್ಸವ ಮತ್ತು ಅದರ ಹಿನ್ನೆಲೆಯ ಅನೇಕ ಚಟುವಟಿಕೆಗಳನ್ನು ಆಯೋಜಿಸಿ ಇದರ ಮೂಲಕ ಕನ್ನಡ ಭಾಷೆಯ ಬಗೆಗೆ ಇನ್ನಷ್ಟು ಆಸಕ್ತಿ ಬೆಳೆಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳು ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ರೂವಾರಿಗಳಾಗಬೇಕೆಂಬುದೇ ನಮ್ಮಅಭಿಮತ.

Vision(ದೃಷ್ಟಿ)

ಪ್ರತಿಯೊಬ್ಬ ವಿದ್ಯಾರ್ಥಿಯು ವಿದ್ಯೆಯ ಜ್ಞಾನದ ಮೂಲಕ ವಿಚಾರವಂತ ವ್ಯಕ್ತಿಯಾಗಿ ಹಾಗು ಆತ್ಮವಿಶ್ವಾಸವುಳ್ಳ ಸುಜ್ಞಾನಿಯನ್ನಾಗಿ ರೂಢಿಸಿ, ಸಮಾಜದಲ್ಲಿ ಧೀಮಂತ ಚೇತನವಾಗಿ
ಹೊರಹೊಮ್ಮುವಂತೆ ಪ್ರೇರೇಪಿಸುವುದು.

Mission( ಗುರಿ)

ನಮ್ಮ ವಿದ್ಯಾರ್ಥಿಗಳು ಮಾನಸಿಕ ಮತ್ತು ಬೌದ್ಧಿಕವಾಗಿ ಸದಾ ಜೀವಿಸಿ, ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಜೀವನವನ್ನು ಪ್ರೀತಿಯಿಂದ ಅನುಭವಿಸಬೇಕು. ಸದಾ ಮನಸ್ಸು ಯಶಸ್ಸಿನ ಹಾದಿಯಲ್ಲಿ ಸರ್ವತೊಮುಖ ಬೆಳವಣಿಗೆಗಾಗಿ ತುಡಿಯುತ್ತಿರಬೇಕು.

Teaching Staff

Kannada

MS. GEETHA LAKSHMI . S. N.

MA (Kannada)

HOD, Kannada Dept

Open chat
Hello 👋
How can we help you?